Select Your Language

Notifications

webdunia
webdunia
webdunia
webdunia

40 ಮಹಿಳೆಯರಿಗೆ ವಿವಾಹದ ಆಮಿಷ ತೋರಿಸಿ ಹಣಪಡೆದು ಪರಾರಿಯಾದ ಆರೋಪಿ ಬಂಧನ

ಅಗ್ರಿಪಾಡಾ
ಮುಂಬೈ , ಭಾನುವಾರ, 24 ಜುಲೈ 2016 (17:01 IST)
ನಗರದಲ್ಲಿ 40 ಮಹಿಳೆಯರಿಗೆ ವಿವಾಹವಾಗುವುದಾಗಿ ಆಮಿಷ ತೋರಿಸಿ ಹಣ ವಂಚಿಸಿ ಪರಾರಿಯಾಗಿದ್ದ ಆರೋಪಿಯನ್ನು ಅಗ್ರಿಪಾಡಾ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.
 
ಬಾಂದ್ರಾದಲ್ಲಿ ಸೈಟ್ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪಿ 26 ವರ್ಷ ವಯಸ್ಸಿನ ನೂರ್ ಸಾಹೇಬ್ ಶೇಖ್, ಬಿಜಿನೆಸ್ ಮಾಡಲು ಹಣ ಬೇಕಾಗಿದೆ ಎಂದು ಹೇಳಿ ಯುವತಿಯರಿಂದ ಹಣ ಪಡೆದು ನಂತರ ಅವರಿಂದ ದೂರವಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 
 
ಬಾಂದ್ರಾದಲ್ಲಿ ನಿವಾಸ ಹೊಂದಿದ್ದ ಶೇಖ್, ಇಬ್ಬರು ಯುವಕರ ಗ್ಯಾಂಗ್ ಕಟ್ಟಿಕೊಂಡಿದ್ದ. ಅದರಲ್ಲಿ ಒಬ್ಬನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
 
ಕಳೆದ ಎರಡು ತಿಂಗಳುಗಳ ಹಿಂದೆ 18 ವರ್ಷ ವಯಸ್ಸಿನ ಹದಿಹರೆಯ ಯುವತಿಯೊಬ್ಬಳು ಶೇಖ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
 
ಆರೋಪಿ ನೂರ್ ಸಾಹೇಬ್ ಶೇಖ್, ಅವಿವಾಹಿತ ಯುವತಿಯರನ್ನು ಗುರಿಯಾಗಿಸಿಕೊಂಡು ದಾಳ ಎಸೆಯುತ್ತಿದ್ದ, ದಾಳಕ್ಕೆ ಬಿದ್ದ ಕೂಡಲೇ ಬಿಜೆನೆಸ್ ಆರಂಭಿಸಲು ಹಣ ಬೇಕಾಗಿದೆ ಎಂದು ಯುವತಿಯನ್ನು ನಂಬಿಸಿ ಅವರಿಂದ ಚಿನ್ನಾಭರಣಗಳನ್ನು ಪಡೆದುಕೊಂಡು ನಂತರ ಅವರನ್ನು ನಿರ್ಲಕ್ಷಿಸಲು ಆರಂಭಿಸುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಸ್‌ನಲ್ಲಿ ಮಗುವಿಗೆ ಲೈಂಗಿಕ ಕಿರುಕುಳ ನೀಡಿದ ಪೊಲೀಸ್ ಸಬ್‌-ಇನ್ಸಪೆಕ್ಟರ್ ಅರೆಸ್ಟ್